Tuesday, January 4, 2011

ಕನ್ನಡ ತಂತ್ರಾಂಶದ ತೊಂದರೆಗಳು

ಪರ್ತಕರ್ತ ಶ್ರೀ. ಪ್ರಭಾಕರ ಬರೆದಿರುವುದನ್ನು ಓದಬೇಕು, ಓದಿದರೆ ಕನ್ನಡ ತಂತ್ರಾಂಶ ದ ತೊಂದರೆಗಳು.

ಎಚ್ ಎಸ್ ಪ್ರಭಾಕರ್, ಹಿರಿಯ ಪತ್ರಕರ್ತರು, ಸಂಯುಕ್ತ ಕರ್ನಾಟಕ.
ಲೇಖಕರು- ಎಚ್ ಎಸ್ ಪ್ರಭಾಕರ್, ಹಿರಿಯ ಪತ್ರಕರ್ತರು
ಲೇಖನ ಕೃಪೆ: ಸಂಯುಕ್ತ ಕರ್ನಾಟಕ

ಎಚ್ ಎಸ್ ಪ್ರಬಾಕರ್ ಬರೆದಿರುವ ಲೇಖನದ ಒಂದು ಬಾಗ ಮಾತ್ರ ಇದು.
ಕನ್ನಡ ತಂತ್ರಾಂಶ ದ ಬಗ್ಗೆ  ಏನು ಏನು ಆಗಿದೆ ಅಂಥ.
ವಿಪರೀತ ಅಸ್ತವ್ಯಸ್ತ ಪರಿಸ್ಥಿತಿ ಎದುರಿಸುತ್ತಿರುವ ಕನ್ನಡ ತಂತ್ರಾಂಶ ಕ್ಷೇತ್ರದಲ್ಲಿ ಈವರೆವಿಗೂ ಏಕ ವಿನ್ಯಾಸದ ಕೀಲಿ ಮಣೆ ರೂಪಿತವಾಗಿಯೇ ಇಲ್ಲ.

ಒಂದು ತಂತ್ರಾಂಶ ಮತ್ತೊಂದಕ್ಕೆ ಹೊಂದಿಕೆಯಾಗುವುದೇ ಇಲ್ಲ;

ಇಂತಹ ಅವ್ಯವಸ್ಥೆಗಳನ್ನೆಲ್ಲ ನಿಯಂತ್ರಿಸಿ ನಿರ್ದೇಶಿಸಲು, ತಂತ್ರಾಂಶಗಳ ಅತಿ ದೊಡ್ಡ ಗ್ರಾಹಕನಾಗಿರುವ ಸರ್ಕಾರದಿಂದ ಅಥವಾ ವಿ.ವಿ.ಗಳಿಂದ ಮಾತ್ರ ಸಾಧ್ಯ.

ಆದರೆ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಿಂದ ಪ್ರಾದೇಶಿಕ ಭಾಷೆಗೆ ಒದಗುವ ಅಪಾಯದ ಅಂದಾಜು ಇವುಗಳಿಗೆ ಇದ್ದಂತಿಲ್ಲ!

ಈಗ ಪ್ರತಿಯೊಂದು ಕ್ಷೇತ್ರದಲ್ಲೂ ದೈನಂದಿನ ವಾಣಿಜ್ಯ ಮತ್ತು ಆಡಳಿತ ವ್ಯವಹಾರವೆಲ್ಲ ಈ ವಿದ್ಯುನ್ಮಾನ ತಂತ್ರಜ್ಞಾನದ ಮೂಲಕವೇ ನಡೆಯುತ್ತಿರುವುದರಿಂದ, ಇಲ್ಲೆಲ್ಲ ಸಮರ್ಥವಾಗಿ ಕನ್ನಡದ ಬಳಕೆ ಆಗದಿದ್ದರೆ ಅದು ಸತ್ತು ಹೋಗುತ್ತದೆ.

ಯಾವುದೇ ಭಾಷೆಯ ಬಳಕೆ ಕಡಿಮೆಯಾಗುತ್ತಾ ಸಾಗಿದರೆ ಅದು ಮುಂದೊಂದು ದಿನ ನಾಶವಾಗುತ್ತದೆ ಎಂಬ ಅಪಾಯಕಾರಿ ಸತ್ಯದ ಅರಿವು ಸರ್ಕಾರಕ್ಕೆ ಇಲ್ಲವೋ ಅಥವಾ ಇದ್ದೂ ಸಹ ಇಲ್ಲದಂತೆ ನಟಿಸುತ್ತಿದೆಯೋ ಗೊತ್ತಿಲ್ಲ!

ಕನ್ನಡದ ಸದ್ಯದ ಸೀಮಿತ ಮಾರುಕಟ್ಟೆ ಹಾಗೂ ಕೈಗೊಳ್ಳುತ್ತಿರುವ ಕೆಲವು ತಪ್ಪು ನೀತಿಗಳಿಂದಾಗಿ ಕನ್ನಡಕ್ಕಾಗಿ ಕೆಲಸ ಮಾಡುತ್ತಿದ್ದ ಸುಮಾರು ೨೩ ಖಾಸಗಿ ಕಂಪನಿಗಳಲ್ಲಿ ಈಗ ಕೇವಲ ಒಂದೆರಡು ಮಾತ್ರ ಉಳಿದುಕೊಂಡಿವೆ;

ಅವೂ ಸಹ ಈಗ ಬಂಡವಾಳ ಹಾಗೂ ಪ್ರೋತ್ಸಾಹದ ಕೊರತೆಯಿಂದ ಬೇರೆ ಕ್ಷೇತ್ರಗಳಿಗೆ ವಲಸೆ ಹೋಗಲು ಚಿಂತಿಸುತ್ತಿವೆ!

ಪ್ರಾದೇಶಿಕ ಭಾಷಾ ತಂತ್ರಾಂಶ ಅಭಿವೃದ್ಧಿ ಕೇವಲ ಸಾಫ್ಟ್‌ವೇರ್ ಇಂಜಿನಿಯರುಗಳ ಕೆಲಸ ಮಾತ್ರವಲ್ಲ. ಅದಕ್ಕೆ ಭಾಷಾ ತಜ್ಞರು, ವ್ಯಾಕರಣ ಶಾಸ್ತ್ರಜ್ಞರು, ಸಾಹಿತ್ಯ ಪರಿಣಿತರು, ಉಚ್ಛಾರಣಾ ತಜ್ಞರು ಮುಂತಾದವರೆಲ್ಲ ಒಟ್ಟಾಗಿ ಸೇರಿ ಮಾಡಬೇಕಾದ ಕೆಲಸವಿದು.

ಇದರ ಸಂಕೀರ್ಣತೆಯನ್ನು ಸಂಬಂಧಪಟ್ಟವರೆಲ್ಲ ಅರಿಯಬೇಕು.

ಇಲ್ಲವಾದರೆ ಐ.ಟಿ. ಕ್ಷೇತ್ರದಲ್ಲಿ ಕನ್ನಡ ಮೂಲೆ ಗುಂಪಾಗುವುದು ಖಚಿತ.

No comments:

Post a Comment