Wednesday, January 12, 2011

ಕನ್ನಡಿಗರು ಗಮನಿಸಬೇಕಾದ ವಿಷಯಗಳು

ಕನ್ನಡಿಗರು ಗಮನಿಸಬೇಕಾದ ವಿಷಯಗಳು
ಎಸ್ಟೇ ಕನ್ನಡ ವೆಬ್ ಸೈಟ್ ಮತ್ತು ಕನ್ನಡ ಬ್ಲಾಗ್ ಗಳು ಇದ್ದರೂ, ಕನ್ನಡ ಆಡಳಿತ ಭಾಷೆ ಆಗುವುದಿಲ್ಲ.
"ನುಡಿ" ಕನ್ನಡ ತಂತ್ರಾಂಶವನ್ನು ಜನರಿಗೆ ಉಚಿತವಾಗಿ ಕೊಟ್ಟರೂ, ಕನ್ನಡ ಆಡಳಿತ ಭಾಷೆ ಆಗುವುದಿಲ್ಲ.
ಕನ್ನಡ ವೆಬ್ ಸೈಟ್ ಮತ್ತು ಕನ್ನಡ ಬ್ಲಾಗ್ ಗಳಿಂದ ಕನ್ನಡ ಭಾಷೆ ಉಳಿಯುವುದಿಲ್ಲ. 
ಕನ್ನಡ ಭಾಷೆ ಉಳಿಯುವುದು ಕಥೆ-ಕಾದಂಬರಿ ಇಂದ ಅಲ್ಲ.
ಗೂಗಲ್ ಅವರ ಸೈಟ್ ನಲ್ಲಿ ಕನ್ನಡ ಅಳವಡಿಸಿದರೂ, ಕರ್ನಾಟಕ ಸರ್ಕಾರದಲ್ಲಿ ಕನ್ನಡ ಆಡಳಿತ ಭಾಷೆ ಆಗುವುದಿಲ್ಲ.
ಕನ್ನಡ ಸಾಹಿತ್ಯ.ಕಂ ಏನೇ ಬಿಡುಗಡೆ ಮಾಡಿದ್ರೂ, ಕರ್ನಾಟಕ ಸರಕಾರದಲ್ಲಿ ಕನ್ನಡ ಆಡಳಿತ ಭಾಷೆ ಆಗುವುದಿಲ್ಲ.
ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಬಳಿಕೆ ಜಾಸ್ತಿ ಯಾಗಬೇಕು. ಕನ್ನಡ ತಂತ್ರಾಂಶ ವನ್ನು ಸರಿ ಪಡಿಸಬೇಕು.
ಕನ್ನಡ ತಂತ್ರಾಂಶ ಬಳಕೆಯು ಕನ್ನಡ ಭಾಷೆಯನ್ನು ಉಳಿಸುತ್ತದೆ.
ನಾವೆಲ್ಲ ಸೇರಿ ಮಾಡಬೇಕಾದ ಕೆಲಸ ಕನ್ನಡ ತಂತ್ರಾಂಶದ ಸರಿ ಪಡಿಸಬೇಕಾದ ಕೆಲಸ.
ಇದನ್ನು ನಾವೆಲ್ಲ ಯೋಚನೆ ಮಾಡಿ ಮಾಡಬೇಕು.

ಯಾವ ಪತ್ರಕರ್ತ್ತರು ಕನ್ನಡ ತಂತ್ರಾಂಶ ದಲ್ಲಿ ಏನು ಆಗಿದೆ ಅಂಥ ಬರೆದಿದ್ದಾರೆ ?
ಯಾವ ಪತ್ರಕರ್ತ್ತರು ಕರ್ನಾಟಕ ಸರಕಾರವನ್ನು ಕನ್ನಡ ತಂತ್ರಾಂಶ ಬಗ್ಗೆ ಕೇಳಿದ್ದಾರೆ ?
ಪತ್ರಕರ್ತ್ತರು, ಕನ್ನಡ ಗಣಕ ಪರಿಷತ್ ಅನ್ನು ಯಾಕೆ ಇನ್ನು ಕೇಳಿಲ್ಲ ? ನುಡಿ ಕನ್ನಡ ತಂತ್ರಾಂಶದ ಬಗ್ಗೆ ?  ನುಡಿ ಕದ್ದಿದ್ದೋ ಅಲ್ವ ಅಂಥ ?
ನುಡಿ ಕನ್ನಡ ತಂತ್ರಾಂಶ ವನ್ನು ಯಾಕೆ ಓಪನ್ ಸೋರ್ಸ್ ಹಾಕಿಲ್ಲ ಅಂಥ ಕೇಳಿದ್ದಾರ ?
ಯಾವ ಪತ್ರ ಕರ್ತ್ತರು ಕದ್ದು ಮಾಡಿದ ನುಡಿ ಕನ್ನಡ ತಂತ್ರಾಂಶವನ್ನು, ಕರ್ನಾಟಕ ಸರಕಾರಕ್ಕೆ ಮಾರಿದ ಕನ್ನಡ ಗಣಕ ಪರಿಷತ್ತನ್ನು ಯಾಕೆ ಇನ್ನು ಪ್ರಶ್ನೆ ಮಾಡಿಲ್ಲ?
ಪತ್ರಕರ್ತ್ತರು, ಎಲ್ಲರೂ ಬರೆದಿರುವ ಪತ್ರಗಳನ್ನ್ಜು ಓದಿ, ಕನ್ನಡ ತಂತ್ರಾಂಶಕ್ಕೆ ಏನು ತೊಂದರೆಗಳು ಆಗಿದೆ ಅಂಥ , ಎಲ್ಲ ಜನರಿಗೆ ತಿಳಿಸಿದ್ದಾರ ?
ಕರ್ನಾಟಕದಲ್ಲಿ ಕವಿಗಳು ಮತ್ತು ಸಾಹಿತಿಗಳು ಕನ್ನಡ ತಂತ್ರಾಂಶ ಕ್ಕೆ ಏನು ಏನು ತೊಂದರೆ ಆಗಿದೆ ಅಂಥ ಯಾಕೆ ನೋಡುತ್ತಿಲ್ಲ ?
ಕನ್ನಡ ಆಡಳಿತ ಭಾಷೆ ಆಗುವುದಕ್ಕೆ ಏನು ತೊಂದರೆಗಳು ಇದೆ ಅಂಥ ಯಾಕೆ ನೋಡುತ್ತಿಲ್ಲ ?
ಕರ್ನಾಟಕದಲ್ಲಿ ಇರುವ ಕವಿಗಳು ಮತ್ತು ಸಾಹಿತಿಗಳು ಕರ್ನಾಟಕ ಸರಕಾರವನ್ನು ಇನ್ನು ಯಾಕೆ ಕನ್ನಡ ತಂತ್ರಾಂಶದ ಬಗ್ಗೆ ಪ್ರಶ್ನೆ ಕೇಳಿಲ್ಲ್ಲ?
ಕನ್ನಡ ಅಭಿವೃದ್ದಿ ಪ್ರದಿಕಾರ, ಕನ್ನಡ ತಂತ್ರಾಂಶದ ಬಗ್ಗೆ ಏನು ಮಾಡುತ್ತಿದೆ ?
ಕನ್ನಡ ಸಾಹಿತ್ಯ ಪರಿಷತ್, ಕನ್ನಡ ತಂತ್ರಾಂಶದ ಬಗ್ಗೆ ಏನು ಮಾಡುತ್ತಿದೆ ?
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ತಂತ್ರಾಂಶದ ಬಗ್ಗೆ ಏನು ಮಾಡುತ್ತಿದೆ ?

No comments:

Post a Comment