Wednesday, January 12, 2011

ಕರ್ನಾಟಕ ಸರ್ಕಾರ ಏನು ಮಾಡಬೇಕು ?

ಕರ್ನಾಟಕ ಸರ್ಕಾರ ಏನು ಮಾಡಬೇಕು ?
ಕರ್ನಾಟಕ ಸರ್ಕಾರವು ಮೊದಲನೆಯದಾಗಿ, "ನುಡಿ" ತಂತ್ರಾಂಶವನ್ನೇ ಬಳಿಸಲೇಬೇಕು ಎಂಭ ಆದೇಶವನ್ನು ಹಿಂತೆಗೆದುಕೊಳ್ಳಬೇಕು.
ಕನ್ನಡ ಗಣಕ ಪರಿಷತ್ ಗೆ ಕರ್ನಾಟಕ ಸರ್ಕಾರ ಕೊಟ್ಟಿರುವ ಸ್ಥಾನ ಮಾನ ವನ್ನು ತೆಗೆದು ಹಾಕಬೇಕು.
ಕರ್ನಾಟಕ ಸರ್ಕಾರದಲ್ಲಿ ಈಗ ಆಗಿರುವ ತಪ್ಪನೆಲ್ಲ ಸರಿಪಡಿಸಬೇಕು.
ಕರ್ನಾಟಕ ಸರಕಾರವನ್ನು ಕನ್ನಡ ಗಣಕ ಪರಿಷತ್ ತಪ್ಪು ದಾರಿಗೆ ಎಳೆದಿದೆ. ಇದನ್ನು ಸರಿಪಡಿಸಬೇಕು.
"ನುಡಿ" ತಂತ್ರಾಂಶ ವನ್ನು ಮುಕ್ತವಾಗಿ ಉಪಯೋಗಿಸಲು "ನುಡಿ" ಸೋರ್ಸ್ ಕೋಡ್ ಅನ್ನು ಅಂತರ್ಜಾಲದಲ್ಲಿ ಹಾಕಿದರೆ, ಎಲ್ಲರು ಸೇರಿ ಇದನ್ನು ಅಭಿವೃದ್ದಿ ಪಡಿಸಬಹುದು. ಕನ್ನಡ ಗಣಕ ಪರಿಷತ್ "ನುಡಿ" ತಂತ್ರಾಂಶ ವನ್ನು ಕರ್ನಾಟಕ ಸರಕಾರಕ್ಕೆ ಮಾರಿದ್ದರು ಯಾಕೆ ಒಪ್ಪುತ್ತಿಲ್ಲ ಇದಕ್ಕೆ? ಕರ್ನಾಟಕ ಸರಕಾರ ಯಾಕೆ ಮಾಡುತ್ತಿಲ್ಲ ಇದನ್ನು?

ಕರ್ನಾಟಕ ಸರ್ಕಾರ ತಾಂತ್ರಿಕ ಸಲಹಾ ಸಮಿತಿ ನೇಮಿಸಬೇಕು.
ಈ ಸಮಿತಿಯಲ್ಲಿ  ತಂತ್ರಜ್ಞಾನ ಬಲ್ಲ ಸಾಹಿತಿಗಳು, ಕಂಪ್ಯೂಟರ್ ತಜ್ಞರು, ಭಾಷಾ ತಜ್ಞರು, ಪತ್ರಿಕಾ ಸಂಪಾದಕರು, ಮುದ್ರಕರು, ಕನ್ನಡ ತಂತ್ರಾಂಶ ತಯಾರಕರು, ವ್ಯಾಕರಣ ಶಾಸ್ತ್ರಜ್ಞರು, ಪ್ರಕಾಶಕರು, ಸಾಹಿತ್ಯ ಪರಿಣಿತರು, ಪತ್ರಿಕೋಧ್ಯಮಿಗಳು, ಉಚ್ಛಾರಣಾ ತಜ್ಞರು, ಕನ್ನಡ ಪ್ರಾಧ್ಯಾಪಕರು, ಸರಕಾರದ ಅದಿಕಾರಿಗಳು, ವಿಮರ್ಶಕರು, ನಿಘಂಟು ತಜ್ಞರು, ಮಾಹಿತಿ ತಂತ್ರಜ್ಞರು ಮತ್ತು ಉದ್ದಿಮೆದಾರರು, ಇರಬೇಕು.

No comments:

Post a Comment